Bevaru

ನಿನ್ನೆಗಳನ್ನ ಮರೆತಿದ್ದಿರಿ

Ravi Ranjan

Image by Ravi Ranjan

ನಿನ್ನೆಗಳನ್ನ ಮರೆತಿದ್ದಿರಿ

ನಾಳೆಗಳನ್ನ ಕೂಲ್ಲುವಿರಿ

ಇಂದಾದರೂ ನೆನಪಿನಲ್ಲಿರಲು ಬಿಡಿ

ಉಸಿರು ಮಲಗುವ ಮುನ್ನ

ಭಾವ ಭಂಜೆಯಾಗುವ ಮುನ್ನ

ಗಂಟಲಾಳದ ಉಗುಳು ಇಳಿಯಲಿ ಬಿಡಿ

ಬೆವರಿನ ವಾಸನೆಗೆ ಬೆಸರವಾಗಿ

ಬಾಯಾರಿಡಿದ ಜೀವಕೆ ನೀರಾಸರೆಯಾಗಿ l

ನಿಂತ ನೆಲದ ಗುರುತು ಮೌನ ತಾಳಿದೆ

ತೆಗೆದು ವಗೆದು ಕಳೆದು ಹೋದ ಸಮಯ

ಯಾರ ಗುರುತಿಡಿದು ಎಲ್ಲಿಯವರೆಗೆ ಕಾಯುವುದು?

ಮರಣಕ್ಕೂ ಮೈಲಿಗೆ, ಬದುಕಿಗಂತೂ ಕಾಮಾಲೆ.

ರವಿರಂಜನ್, ಬರಹಗಾರ. ಒಂದು ವರ್ಷದಿಂದ  ಮರ ಜೊತೆ ಕೆಲಸ ಮಾಡ್ತಾಯಿದ್ದಾರೆ.

ತೆಗೆದು ವಗೆದು ಕಳೆದು ಹೋದ ಸಮಯ ಯಾರ ಗುರುತಿಡಿದು ಎಲ್ಲಿಯವರೆಗೆ ಕಾಯುವುದು?