Bevaru

ಜಂತಿ

Ravi Ranjan

ಮುಟ್ಟಿ ತಟ್ಟಲಾಗದ ದ್ವನಿಯಿಂದ
ಎತ್ತರಿಸಿ ಕ್ಯಾಕರಿಸಿ ಉಗಿದರೂ
ಗರ ಬಡಿದ ಕಲ್ಲಿಗೆ ತಾಕುವುದು ಏನಿತು?
ಎಲ್ಲ ನೂವುಂಡು ಮಗ್ಗಲು ಹೊರಳಿ
ಮಲಗಿದಾಗ ನೆತ್ತಿಯ ಮೆಲಣದ
ಜಂತಿಯನ್ನು ಹೊಲೆದು ಮುಚ್ಚುವುದು ಏನಿತು?

ದುಡಿವ ಕೈಯಲ್ಲಿ ಸಾವಿನ ನಂಜಿಲ್ಲ ಮರಣದಾಚೆಗೂ ಸುಖದ ಸದ್ದಿಲ್ಲ
ಅಲ್ಲಷ್ಟು ಇಲ್ಲಷ್ಟು ನಲಿದಾಗ, ಎಚ್ಚತ್ತು ತೆಗಳುವುದು ಉಳಿತು.